
ಪಡಿತರ ಚೀಟಿಯಲ್ಲಿನ ಅನರ್ಹರನ್ನು ಪತ್ತೆಹಚ್ಚಲು ಸರ್ಕಾರ ಕಡ್ಡಾಯಗೊಳಿಸಿರುವ ಇ-ಕೆವೈಸಿ ಪ್ರಕ್ರಿಯೆಯು ಸರ್ವರ್ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ತೀವ್ರ ವಿಳಂಬವಾಗುತ್ತಿದೆ.
ಕುಟುಂಬದ ಪ್ರತಿಯೊಬ್ಬ ಸದಸ್ಯರು ಬಯೋಮೆಟ್ರಿಕ್ ನೀಡಬೇಕಿದ್ದು, ಸರ್ವರ್ ದೋಷದಿಂದಾಗಿ ದಿನಕ್ಕೆ ಕೇವಲ ಇಬ್ಬರು ಫಲಾನುಭವಿಗಳ ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿದೆ.
ಒಟಿಪಿ ಬರುವಲ್ಲಿ ವಿಳಂಬ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಕೂಲಿ ಕಾರ್ಮಿಕರು ಹಾಗೂ ವೃದ್ಧರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯುವ ಅನಿವಾರ್ಯತೆ ಎದುರಾಗಿದೆ.