
ಕರ್ನಾಟಕ ಸರ್ಕಾರವು ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಅಧಿಕೃತ ಆದೇಶ ಹೊರಡಿಸಿದ್ದು, ಅಕ್ಟೋಬರ್ 25ರ ಭಾನುವಾರದ ಬದಲು ಅಕ್ಟೋಬರ್ 26ರ ಸೋಮವಾರದಂದು ರಜೆ ಘೋಷಿಸಲಾಗಿದೆ.
ಶೀಗಿ ಹುಣ್ಣಿಮೆಯ ದಿನದಂದೇ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವ ಸಂಪ್ರದಾಯವಿರುವುದರಿಂದ ಈ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.
ಈ ರಜೆಯು ಬ್ಯಾಂಕ್ಗಳಿಗೂ ಅನ್ವಯಿಸಲಿದ್ದು, ಅಕ್ಟೋಬರ್ 24ರ ನಾಲ್ಕನೇ ಶನಿವಾರ, ಭಾನುವಾರ ಮತ್ತು ಸೋಮವಾರ ಸೇರಿ ಸರ್ಕಾರಿ ನೌಕರರಿಗೆ ಸತತ 3 ದಿನಗಳ ಸರಣಿ ರಜೆ ದೊರೆಯಲಿದೆ.