
ಮೆಕ್ಯಾನಿಕಲ್ ಎಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದ ಜಾನ್ ಟರ್ನಸ್, ಸೆಪ್ಟೆಂಬರ್ 1, 2026ರಂದು ಆ್ಯಪಲ್ ಕಂಪನಿಯ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
2001ರಲ್ಲಿ ಆ್ಯಪಲ್ ಸೇರಿದ ಟರ್ನಸ್, ಐಫೋನ್, ಮ್ಯಾಕ್ ಮತ್ತು ಆ್ಯಪಲ್ ವಾಚ್ ಸೇರಿದಂತೆ ಪ್ರಮುಖ ಹಾರ್ಡ್ವೇರ್ ಉತ್ಪನ್ನಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಯಾವುದೇ ಮ್ಯಾನೇಜ್ಮೆಂಟ್ ಪದವಿ ಇಲ್ಲದಿದ್ದರೂ, ತಮ್ಮ ತಾಂತ್ರಿಕ ಕೌಶಲ್ಯ ಮತ್ತು ಪರಿಶ್ರಮದ ಮೂಲಕ ಜಾನ್ ಟರ್ನಸ್ ವಿಶ್ವದ ಅತಿದೊಡ್ಡ ಟೆಕ್ ಕಂಪನಿಯ ಚುಕ್ಕಾಣಿ ಹಿಡಿದಿದ್ದಾರೆ.