
ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ‘ಹನುಮಾನ್ ಅಂಶ್’ ಚಿತ್ರದ ಕಥೆಯನ್ನು ಪ್ರಮುಖ ಒಟಿಟಿ ಸಂಸ್ಥೆಯೊಂದು ತಿರಸ್ಕರಿಸಿದ್ದಾಗಿ ನಿರ್ದೇಶಕ ವಿಶಾಲ್ ಚತುರ್ವೇದಿ ಬಹಿರಂಗಪಡಿಸಿದ್ದಾರೆ.
ಬಿಡುಗಡೆಯಾದ 27ನೇ ದಿನದ ವೇಳೆಗೆ ಈ ಸಿನಿಮಾ ಭಾರತದಲ್ಲಿ ಸುಮಾರು 61.88 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ.
ಆರಂಭದಲ್ಲಿ ಕೇವಲ 10 ಲಕ್ಷ ರೂಪಾಯಿ ಗಳಿಕೆ ಕಂಡಿದ್ದ ಈ ಚಿತ್ರ, ಪ್ರೇಕ್ಷಕರ ಮೆಚ್ಚುಗೆಯಿಂದಾಗಿ 4ನೇ ವಾರದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.