
ನಟ ಜಗ್ಗೇಶ್ ಅವರು ಶಿವರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿ ರಾಖಿ ಕಟ್ಟಿ ತಮ್ಮ ದಶಕಗಳ ಸ್ನೇಹವನ್ನು ಸ್ಮರಿಸಿಕೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಶಿವರಾಜ್‌ಕುಮಾರ್ ಮತ್ತು ಗೀತಾ ದಂಪತಿಗಳು ಜಗ್ಗೇಶ್ ಅವರಿಗೆ ಸುಮಾರು 2.60 ಲಕ್ಷ ರೂಪಾಯಿ ಬೆಲೆಯ ಐಷಾರಾಮಿ ವರ್ಸಾಷೆ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜಗ್ಗೇಶ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದ್ದಾರೆ.