
ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಜಿಯೋ ನೆಟ್ವರ್ಕ್ನಲ್ಲಿ ಮುಂದಿನ ಐದು ವರ್ಷಗಳಲ್ಲಿ 31.4 ಕೋಟಿ ಹೊಸ ಬಳಕೆದಾರರು ಸೇರ್ಪಡೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಯೋದ ಒಟ್ಟು ಹೊಸ ಬ್ರಾಂಡ್ಬ್ಯಾಂಡ್ ಸೇರ್ಪಡೆಗಳ ಪೈಕಿ ಶೇ. 40ರಷ್ಟು ಪಾಲು ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಿಂದ ಬಂದಿರುವುದು ವಿಶೇಷ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಕೇವಲ 19 ತಿಂಗಳಲ್ಲಿ ಶೇ. 99ರಷ್ಟು ಜನಸಂಖ್ಯೆಯನ್ನು ವ್ಯಾಪಿಸುವ ಮೂಲಕ ಜಿಯೋ ಅತ್ಯಂತ ವೇಗವಾಗಿ 5ಜಿ ನೆಟ್ವರ್ಕ್ ಅಳವಡಿಸಿದೆ ಎಂದು ಆಕಾಶ್ ಅಂಬಾನಿ ವಿವರಿಸಿದ್ದಾರೆ.