
ರಾಜ್ಯದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕಾವೇರಿ ಮತ್ತು ಕೃಷ್ಣಾ ನದಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಹಾರಂಗಿ ಹಾಗೂ ಆಲಮಟ್ಟಿ ಅಣೆಕಟ್ಟುಗಳು ಗರಿಷ್ಠ ಮಟ್ಟದ ಸಮೀಪ ತಲುಪಿವೆ.
ಆಗಸ್ಟ್ 12ರ ಅಂಕಿ-ಅಂಶದ ಪ್ರಕಾರ ರಾಜ್ಯದ 22 ಪ್ರಮುಖ ಜಲಾಶಯಗಳಲ್ಲಿ 379.379 TMC ಅಂದರೆ ಶೇ. 71.28ರಷ್ಟು ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ 432.913 TMC (ಶೇ. 81.24) ನೀರು ಸಂಗ್ರಹವಿತ್ತು, ಈ ಬಾರಿ ಒಟ್ಟು ನೀರಿನ ಸಂಗ್ರಹದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ.