
ಹೈದರಾಬಾದ್ನಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ನಿಗದಿತ ಸಮಯಕ್ಕಿಂತ 22 ನಿಮಿಷ ಹೆಚ್ಚುವರಿಯಾಗಿ ಜಾಹೀರಾತು ಪ್ರಸಾರ ಮಾಡಿದ್ದ ಪಿವಿಆರ್ ಸಿನಿಮಾಸ್ ವಿರುದ್ಧ ವಕೀಲ ಚಂದಾ ಅತೀಶ್ ಕುಮಾರ್ ಗ್ರಾಹಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಗೆದ್ದಿದ್ದಾರೆ.
ಸೇವಾ ನ್ಯೂನತೆ ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ಪಿವಿಆರ್ ಸಂಸ್ಥೆಯು ದೂರುದಾರರಿಗೆ ₹20,000 ಪರಿಹಾರ ಹಾಗೂ ₹5,000 ಕಾನೂನು ವೆಚ್ಚ ಪಾವತಿಸುವಂತೆ ಹೈದರಾಬಾದ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಇದರೊಂದಿಗೆ ದಂಡನಾತ್ಮಕ ಹಾನಿಯಾಗಿ ₹50,000 ಮೊತ್ತವನ್ನು ಜಿಲ್ಲಾ ಗ್ರಾಹಕ ಕಲ್ಯಾಣ ನಿಧಿಗೆ ಜಮಾ ಮಾಡುವಂತೆ ನ್ಯಾಯಾಲಯವು ಕಟ್ಟುನಿಟ್ಟಿನ ಸೂಚನೆ ನೀಡಿದೆ.