
ಸೊಳ್ಳೆಗಳು ದೇಹದ ವಾಸನೆ, ಚರ್ಮದ ಮೇಲಿನ ಬ್ಯಾಕ್ಟೀರಿಯಾ, ದೇಹದ ಉಷ್ಣತೆ ಮತ್ತು ರಕ್ತದ ಗುಂಪಿನ ಆಧಾರದ ಮೇಲೆ ಜನರನ್ನು ಕಚ್ಚಲು ಆಕರ್ಷಿತವಾಗುತ್ತವೆ.
ಜಪಾನ್ನಲ್ಲಿ ನಡೆದ ಅಧ್ಯಯನದ ಪ್ರಕಾರ, 'O' ರಕ್ತದ ಗುಂಪಿನ ಜನರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಗರ್ಭಿಣಿಯರು, ಹೆಚ್ಚು ವ್ಯಾಯಾಮ ಮಾಡುವವರು ಮತ್ತು ಮದ್ಯ ಸೇವಿಸುವವರು ಹೆಚ್ಚು ಇಂಗಾಲದ ಡೈಆಕ್ಸೈಡ್ ಹೊರಸೂಸುವುದರಿಂದ ಸೊಳ್ಳೆಗಳ ದಾಳಿಗೆ ಹೆಚ್ಚು ತುತ್ತಾಗುತ್ತಾರೆ.