
ರಾಯಚೂರು ಜಿಲ್ಲೆಯಲ್ಲಿ ತೀವ್ರ ಬರಗಾಲ ಹಾಗೂ ವಿದ್ಯುತ್ ಅಭಾವದಿಂದ ಕಂಗೆಟ್ಟಿರುವ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಈ ಹಿಂದೆ 12 ಗಂಟೆಗಳ ಕಾಲ ಪೂರೈಕೆಯಾಗುತ್ತಿದ್ದ ವಿದ್ಯುತ್ ಅನ್ನು ಇತ್ತೀಚೆಗೆ ಕೇವಲ 6 ರಿಂದ 7 ಗಂಟೆಗೆ ಇಳಿಸಲಾಗಿದ್ದು, ಇದರಿಂದ ಬೆಳೆಗಳು ಒಣಗುತ್ತಿವೆ.
ಯಾಪಲದಿನ್ನಿ ಗ್ರಾಮದ ಜಯನ ನಾಯಕ್ ಎಂಬ ರೈತ ಜೆಸ್ಕಾಂ ಅಧಿಕಾರಿಯ ಕಾಲುಗಳಿಗೆ ಬಿದ್ದು 12 ಗಂಟೆಗಳ ಕಾಲ ವಿದ್ಯುತ್ ನೀಡುವಂತೆ ಅಳಲು ತೋಡಿಕೊಂಡಿದ್ದಾರೆ.