
ಅಮೆರಿಕದ ರಾಜತಾಂತ್ರಿಕ ನಿಯೋಗ ಮಾಸ್ಕೋ ತಲುಪಿದ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲಿನ ವೈಮಾನಿಕ ದಾಳಿಗಳನ್ನು 3 ದಿನಗಳ ಕಾಲ ಸ್ಥಗಿತಗೊಳಿಸಿದ್ದಾರೆ.
ಯುದ್ಧ ಕೊನೆಗೊಳಿಸುವ ಕುರಿತು ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ಕದನ ವಿರಾಮದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.
ಕಳೆದ ನಾಲ್ಕೂವರೆ ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗಡಿ ರೇಖೆ ಮತ್ತು ನ್ಯಾಟೋ ಸೇರ್ಪಡೆ ಕುರಿತು ಅಮೆರಿಕದ ನಿಯೋಗವು ಕರಡು ಪ್ರಸ್ತಾವನೆ ಸಲ್ಲಿಸಿದೆ.