
ಅಮೆರಿಕದ ಪ್ರಿಡಿಕ್ಷನ್ ಮಾರುಕಟ್ಟೆ ವೇದಿಕೆಯಾದ 'ಕಲ್ಶಿ'ಯ ಸಹಸಂಸ್ಥಾಪಕಿ ಮತ್ತು ಮುಖ್ಯ ನಿರ್ವಹಣಾಧಿಕಾರಿ ಲುವಾನಾ ಲೋಪೆಸ್ ಲಾರಾ ತಮ್ಮ 30ನೇ ವಯಸ್ಸಿನಲ್ಲಿ 2.6 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ವಿಶ್ವದ ಅತಿ ಕಿರಿಯ ಮಹಿಳಾ ಬಿಲಿಯನೇರ್ ಆಗಿದ್ದಾರೆ.
ಬ್ರೆಜಿಲ್ನ ಮಧ್ಯಮ ವರ್ಗದ ಕುಟುಂಬದಿಂದ ಬಂದ ಲುವಾನಾ ಅವರು ಬೃಹತ್ ಸಂಪತ್ತು ಗಳಿಸಿದರೂ ಈಗಲೂ ಪ್ರತಿದಿನ 12 ರಿಂದ 14 ಗಂಟೆಗಳ ಕಾಲ ಆಫೀಸಿನಲ್ಲಿ ಕೆಲಸ ಮಾಡುತ್ತಾರೆ.
ಕಲ್ಶಿ ಸಂಸ್ಥೆಯ ಮೌಲ್ಯವು ಮೇ 2026ರ ಹೊತ್ತಿಗೆ 22 ಬಿಲಿಯನ್ ಡಾಲರ್ ತಲುಪಿದ್ದು, ಸದ್ಯ ಕಂಪನಿಯು 40 ಬಿಲಿಯನ್ ಡಾಲರ್ ಮೌಲ್ಯಮಾಪನದಲ್ಲಿ ಹೊಸ ಹೂಡಿಕೆಗಳಿಗಾಗಿ ಮಾತುಕತೆ ನಡೆಸುತ್ತಿದೆ.