
ನಿರಂತರ ಮಳೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದು (ಅಕ್ಟೋಬರ್ 16) ನಡೆಯಬೇಕಿದ್ದ 'ಯುವ ದಸರಾ' ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
'ಸ್ಯಾಂಡಲ್ ವುಡ್ ನೈಟ್ಸ್' ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಶಿವರಾಜ್ಕುಮಾರ್, ಡಾಲಿ ಧನಂಜಯ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಬೇಕಿತ್ತು.
ಮಳೆಯ ಮುನ್ಸೂಚನೆ ಹಾಗೂ ಸುರಕ್ಷತೆಯ ಕಾರಣದಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.