
ಜಮ್ಮು-ಕಾಶ್ಮೀರದ ಸಂಸದ ಆಘಾ ಸೈಯದ್ ರೂಹುಲ್ಲಾ ಮೆಹ್ದಿ ಅವರು ಸಂಸದ ಸ್ಥಾನ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ನಾಯಕತ್ವ ಜನರ ನಂಬಿಕೆಗೆ ದ್ರೋಹ ಬಗೆದಿದೆ ಎಂದು ಆರೋಪಿಸಿರುವ ಅವರು, ತನ್ನ 24 ವರ್ಷಗಳ ಪಕ್ಷದ ಬಾಂಧವ್ಯವನ್ನು ಅಂತ್ಯಗೊಳಿಸಿದ್ದಾರೆ.
ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದ ವಿರುದ್ಧ ಪಕ್ಷದ ಶಾಸಕರಲ್ಲೇ ಭಿನ್ನಮತ ಭುಗಿಲೆದ್ದಿದ್ದು, 25ಕ್ಕೂ ಹೆಚ್ಚು ಶಾಸಕರು ಸಚಿವ ಸಂಪುಟ ಪುನಾರಚನೆಗೆ ಒತ್ತಾಯಿಸಿದ್ದಾರೆ.