
ಬಾಲಿವುಡ್, ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ಕ್ಯಾನ್ಸರ್ನಿಂದಾಗಿ ಆಗಸ್ಟ್ 4ರ ಸಂಜೆ ನಿಧನರಾದರು.
ಬುಧವಾರ ಮುಂಬೈನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಆಮಿರ್ ಖಾನ್, ಅಶುತೋಷ್ ಗೋವಾರಿಕರ್ ಸೇರಿದಂತೆ 'ಲಗಾನ್' ಚಿತ್ರತಂಡದ ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಪ್ರದೀಪ್ ರಾವತ್ ಅವರು 'ಲಗಾನ್', 'ಘಜಿನಿ', 'ಸರ್ಫರೋಷ್' ಮತ್ತು 'ಮಹಾಭಾರತ' ಧಾರಾವಾಹಿಯ ಅಶ್ವತ್ಥಾಮ ಪಾತ್ರದ ಮೂಲಕ ಜನಪ್ರಿಯರಾಗಿದ್ದು, ಪತ್ನಿ ಕಲ್ಯಾಣಿ ರಾವತ್ ಮತ್ತು ಮಗ ವಿಕ್ರಮಾದಿತ್ಯ ಅವರನ್ನು ಅಗಲಿದ್ದಾರೆ.