
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ನವದೆಹಲಿಯಲ್ಲಿ ಕರ್ನಾಟಕದ 9 ಸಾಧಕರು ಸೇರಿದಂತೆ ಒಟ್ಟು 115 ಕಲಾವಿದರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.
ಮೃದಂಗ ವಾದಕ ಎ.ವಿ.ಆನಂದ್ ಅವರಿಗೆ ಅಕಾಡೆಮಿ ರತ್ನ ಪ್ರಶಸ್ತಿ ಲಭಿಸಿದ್ದು, ಟಿ.ಎಸ್.ನಾಗಾಭರಣ, ಕೆರೆಮನೆ ಶಿವಾನಂದ ಹೆಗಡೆ ಸೇರಿದಂತೆ ಹಲವರು ಪ್ರಶಸ್ತಿ ಸ್ವೀಕರಿಸಿದರು.
ಈ ಪ್ರಶಸ್ತಿಗಳು 2024 ಮತ್ತು 2025ನೇ ಸಾಲಿನ ಸಾಧನೆಗಾಗಿ ನೀಡಲಾಗಿದ್ದು, ವಿವಿಧ ಸಂಗೀತ ಮತ್ತು ನೃತ್ಯ ಪ್ರಕಾರಗಳ ಕಲಾವಿದರನ್ನು ಗೌರವಿಸಲಾಗಿದೆ.