
ರಾಮನಗರ ಮತ್ತು ಚನ್ನಪಟ್ಟಣದ ನಡುವೆ 75 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 20 ಎಕರೆ ವಿಸ್ತೀರ್ಣದ ಹೈಟೆಕ್ ರೇಷ್ಮೆ ಮಾರುಕಟ್ಟೆ ಉದ್ಘಾಟನೆಗೆ ಸಿದ್ಧವಾಗಿದೆ.
ಪ್ರಸ್ತುತ ಪ್ರತಿದಿನ 40-45 ಟನ್ ರೇಷ್ಮೆಗೂಡು ಮಾರಾಟವಾಗುತ್ತಿದ್ದು, ಹೊಸ ಮಾರುಕಟ್ಟೆ ಆರಂಭದ ನಂತರ ಇದು 110 ರಿಂದ 115 ಟನ್ಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಈ ಮಾರುಕಟ್ಟೆಯಲ್ಲಿ ಗಣಕೀಕೃತ ಹರಾಜು ಸಭಾಂಗಣ, ಸೋಲಾರ್ ವ್ಯವಸ್ಥೆ ಮತ್ತು ಬೃಹತ್ ಪಾರ್ಕಿಂಗ್ ಸೌಲಭ್ಯಗಳಿದ್ದು, ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ.