
ವುಮೆನ್ಸ್ ಪ್ರೀಮಿಯರ್ ಲೀಗ್ನ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕರ್ನಾಟಕದ ವೃಂದಾ ದಿನೇಶ್ ಸೇರಿದಂತೆ ಒಟ್ಟು ನಾಲ್ವರು ಆಟಗಾರ್ತಿಯರನ್ನು ಖರೀದಿಸಿದೆ.
ಆಸ್ಟ್ರೇಲಿಯಾದ ಆಲ್ರೌಂಡರ್ ಜೆಸ್ ಜೊನಾಸೆನ್ ಅವರನ್ನು 40 ಲಕ್ಷ ರೂ.ಗೆ ಹಾಗೂ ದಕ್ಷಿಣ ಆಫ್ರಿಕಾದ ಕ್ಲೋಯ್ ಟ್ರಯಾನ್ ಅವರನ್ನು 30 ಲಕ್ಷ ರೂ.ಗೆ ಆರ್ಸಿಬಿ ಪಡೆದುಕೊಂಡಿದೆ.
ಮಹಾರಾಷ್ಟ್ರದ ತೇಜಲ್ ಹಸಬ್ನಿಸ್ ಅವರನ್ನು 30 ಲಕ್ಷ ರೂ.ಗೆ ಮತ್ತು ಕರ್ನಾಟಕದ ಯುವ ಆಟಗಾರ್ತಿ ವೃಂದಾ ದಿನೇಶ್ ಅವರನ್ನು 10 ಲಕ್ಷ ರೂ.ಗಳ ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.