
ಕರ್ನಾಟಕದಲ್ಲಿ ಬರಗಾಲ ಹಾಗೂ ಮಳೆ ಕೊರತೆಯಿಂದ ಭತ್ತದ ಇಳುವರಿ ಕುಸಿದಿದ್ದು, ಜನಸಾಮಾನ್ಯರ ನೆಚ್ಚಿನ ಸೋನಾ ಮಸೂರಿ ಅಕ್ಕಿ ಬೆಲೆ ಪ್ರತಿ ಕೆ.ಜಿಗೆ 100 ರೂಪಾಯಿ ಗಡಿ ತಲುಪುತ್ತಿದೆ.
ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಕೆಲ ತಿಂಗಳ ಹಿಂದೆ 69 ರೂಪಾಯಿ ಇದ್ದ ಸೋನಾ ಮಸೂರಿ ಬೆಲೆ ಈಗ 90 ರೂಪಾಯಿ ದಾಟಿದೆ.
ಬೆಲೆ ಏರಿಕೆಯು ಬಡ ಹಾಗೂ ಮಧ್ಯಮ ವರ್ಗದವರ ಬಜೆಟ್ ಮೇಲೆ ಹೊಡೆತ ನೀಡಿದ್ದು, ಹೋಟೆಲ್ ಉದ್ಯಮಕ್ಕೂ ಸಂಕಷ್ಟ ತಂದಿದೆ.