
ಹೆಚ್ಡಿಎಫ್ಸಿ ಬ್ಯಾಂಕ್ ತನ್ನ ಅರ್ಹ ಉದ್ಯೋಗಿಗಳಿಗೆ ಉದ್ಯೋಗಿ ಶೇರು ಮಾಲೀಕತ್ವ ಯೋಜನೆಯಡಿ (ESOP) 18,97,180 ಈಕ್ವಿಟಿ ಶೇರುಗಳನ್ನು ಹಂಚಿಕೆ ಮಾಡಲು ಅನುಮೋದನೆ ನೀಡಿದೆ.
ಈ ಶೇರು ಹಂಚಿಕೆಯ ನಂತರ ಬ್ಯಾಂಕ್ನ ಪಾವತಿ ಶೇರು ಬಂಡವಾಳವು 1,541.86 ಕೋಟಿಗೆ ಹೆಚ್ಚಳವಾಗಲಿದೆ ಎಂದು ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಲಾಗಿದೆ.
ಬ್ಯಾಂಕ್ನ ಎರಡನೇ ತ್ರೈಮಾಸಿಕ ಆರ್ಥಿಕ ಫಲಿತಾಂಶಗಳು ಶೀಘ್ರವೇ ಪ್ರಕಟವಾಗಲಿದ್ದು, ಹೂಡಿಕೆದಾರರು ನಿವ್ವಳ ಲಾಭ ಮತ್ತು ಆಸ್ತಿ ಗುಣಮಟ್ಟದ ಮೇಲಿನ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ.