Education
ಕಾಮೆಡ್‌-ಕೆ ಪರೀಕ್ಷೆ: ಅಕ್ರಮ ತಡೆಗೆ ಸೈಬರ್ ಭದ್ರತಾ ತಜ್ಞರ ನೇಮಕ

ಕಾಮೆಡ್‌-ಕೆ ಪರೀಕ್ಷೆ: ಅಕ್ರಮ ತಡೆಗೆ ಸೈಬರ್ ಭದ್ರತಾ ತಜ್ಞರ ನೇಮಕ

prajavani1h
THE BRIEF
1

ಮುಂದಿನ ವರ್ಷ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯಲು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು (ಕಾಮೆಡ್‌-ಕೆ) ಮೂವರು ಸೈಬರ್ ಭದ್ರತಾ ತಜ್ಞರನ್ನು ನೇಮಿಸಿಕೊಳ್ಳಲಿದೆ.

2

ಪ್ರಸಕ್ತ ವರ್ಷ ಜಾರ್ಖಂಡ್‌ನ ಜಮ್‌ಷೆಡ್‌ಪುರ ಕೇಂದ್ರದಲ್ಲಿ ಅಕ್ರಮಗಳು ವರದಿಯಾಗಿರುವುದು ಹಾಗೂ ಅಗ್ರ 10 ಶ್ರೇಯಾಂಕಗಳಲ್ಲಿ ಐದು ಸ್ಥಾನಗಳು ಅಲ್ಲಿನ ವಿದ್ಯಾರ್ಥಿಗಳಿಗೆ ಲಭಿಸಿರುವುದು ಆಡಿಟ್ ವೇಳೆ ಬೆಳಕಿಗೆ ಬಂದಿದೆ.

3

ಮುಂದಿನಿಂದ ಪರೀಕ್ಷೆಗೆ 20 ನಿಮಿಷ ಮುನ್ನ ಮಾತ್ರ ಪಾಸ್‌ವರ್ಡ್ ಒದಗಿಸಲಾಗುವುದು ಮತ್ತು 7 ಸೆಟ್‌ಗಳ ಪ್ರಶ್ನೆ ಪತ್ರಿಕೆಗಳನ್ನು ಅಪ್‌ಲೋಡ್ ಮಾಡಲಾಗುವುದು ಎಂದು ಕಾಮೆಡ್‌-ಕೆ ತಿಳಿಸಿದೆ.