Indian Politics
ಕೆಪಿಎಸ್​ಸಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಅರೆಸ್ಟ್

ಕೆಪಿಎಸ್​ಸಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಅರೆಸ್ಟ್

oneindia36m
THE BRIEF
1

ಉದ್ಯೋಗಕ್ಕಾಗಿ ಲಂಚ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

2

ಸಂಜಯನಗರದ ಸಾಹುಕಾರ್ ನಿವಾಸ ಹಾಗೂ ಡಾಲರ್ಸ್ ಕಾಲೋನಿಯ ಗೀತಾ ಅವರ ಫ್ಲ್ಯಾಟ್ ಮೇಲೆ ದಾಳಿ ನಡೆಸಿ, ಸುದೀರ್ಘ ವಿಚಾರಣೆ ಬಳಿಕ ಇಬ್ಬರನ್ನೂ ವಶಕ್ಕೆ ಪಡೆದು ಕೋರಮಂಗಲದ ನ್ಯಾಯಾಧೀಶರ ಅಧಿಕೃತ ನಿವಾಸಕ್ಕೆ ಕರೆದೊಯ್ಯಲಾಗಿದೆ.

3

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಜಾಲಕ್ಕೆ ಸಂಬಂಧಿಸಿದಂತೆ ಸುಗುರೇಶ್ ಜಾಕಾ ಎಂಬಾತನ ತಪ್ಪೊಪ್ಪಿಗೆ ಹೇಳಿಕೆ ಹಾಗೂ ಸಾಹುಕಾರ್ ಅವರ ಕರೆ ವಿವರಗಳ ಆಧಾರದ ಮೇಲೆ ಈ ಮಹತ್ವದ ಕಾರ್ಯಾಚರಣೆ ನಡೆಸಲಾಗಿದೆ.