
ತುಮಕೂರಿನಲ್ಲಿ ಮಾತನಾಡಿದ ಹಿರಿಯ ನಾಯಕ ಕೆಎನ್ ರಾಜಣ್ಣ, ಕಾಂಗ್ರೆಸ್ ಇತಿಹಾಸದಲ್ಲಿ ಸಚಿವ ಸಂಪುಟ ಪಟ್ಟಿ ಬದಲಾವಣೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ತಿಳಿಸಿದ್ದಾರೆ.
ಹೈಕಮಾಂಡ್ ನೀಡಿದ್ದ ಪಟ್ಟಿಯಲ್ಲಿ ಬದಲಾವಣೆ ಮಾಡಿ ಎಂಎಲ್ಸಿ ಗಾಯತ್ರಿ ಅವರನ್ನು ಕೈಬಿಟ್ಟು, ಮಂಕಾಳ ವೈದ್ಯರ ಬದಲಿಗೆ ಎಸ್ಎಸ್ ಮಲ್ಲಿಕಾರ್ಜುನ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.
ಸಂಪುಟ ಪುನಾರಚನೆ ವೇಳೆ ಅಸಮಾಧಾನ ಸಹಜವಾಗಿದ್ದು, ಪಕ್ಷದ ನಾಯಕರು ಇದನ್ನು ಬಗೆಹರಿಸುತ್ತಾರೆ ಮತ್ತು ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ.