Health & Environment
ಅಸ್ಸಾಂ ಪ್ರವಾಹ: 1.55 ಲಕ್ಷ ಜನ ಸಂಕಷ್ಟ, 98ಕ್ಕೆ ಏರಿದ ಸಾವು

ಅಸ್ಸಾಂ ಪ್ರವಾಹ: 1.55 ಲಕ್ಷ ಜನ ಸಂಕಷ್ಟ, 98ಕ್ಕೆ ಏರಿದ ಸಾವು

prajavani2h
THE BRIEF
1

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬರು ಮೃತಪಡುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 98ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

2

ಶಿವಸಾಗರ, ಲಖಿಂಪುರ ಮತ್ತು ಗೋಲಾಘಾಟ್ ಸೇರಿದಂತೆ 13 ಜಿಲ್ಲೆಗಳ 464 ಗ್ರಾಮಗಳು ಬಾಧಿತವಾಗಿದ್ದು, ಒಟ್ಟು 1,55,849 ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ.

3

ರಾಜ್ಯ ಸರ್ಕಾರವು 55 ಪರಿಹಾರ ಶಿಬಿರಗಳನ್ನು ತೆರೆದು 10 ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಿದ್ದು, 10,748 ಹೆಕ್ಟೇರ್ ಬೆಳೆ ಪ್ರದೇಶ ಮತ್ತು 47 ಸಾವಿರ ಜಾನುವಾರುಗಳು ಪ್ರವಾಹದಿಂದ ಬಾಧಿತವಾಗಿವೆ.