
ಆಗಸ್ಟ್ 2010ರಲ್ಲಿ ಫಿಲಿಪೈನ್ಸ್ನ ಸೆಬು ಪ್ರಾಂತ್ಯದಲ್ಲಿ 32 ವಿದ್ಯಾರ್ಥಿಗಳಿದ್ದ ಬಸ್ಸು 500 ಅಡಿ ಆಳದ ಪ್ರಪಾತಕ್ಕೆ ಬೀಳುವಾಗ ದೈತ್ಯ ಪೈನ್ ಮರವೊಂದು ಅಡ್ಡಲಾಗಿ ನಿಂತು ಪ್ರಾಣಾಪಾಯದಿಂದ ಪಾರು ಮಾಡಿತು.
ಈ ಮರವನ್ನು 35 ವರ್ಷಗಳ ಹಿಂದೆ ಎಪಿಮಾಕೊ ಅಮಾನ್ಸಿಯೊ ಎಂಬುವವರು ತಮ್ಮ ಜಮೀನಿನಲ್ಲಿ ಮಣ್ಣು ಕುಸಿಯುವುದನ್ನು ತಡೆಯಲು ಭೂ ಸಂರಕ್ಷಣೆಗಾಗಿ ನೆಟ್ಟಿದ್ದರು.
ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನೆಟ್ಟ ಆ ಮರವು ದಶಕಗಳ ನಂತರ 32 ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿಯಾಗಿ ಪರಿಣಮಿಸಿ, ಪ್ರಕೃತಿಯ ಮಹತ್ವವನ್ನು ಸಾರಿದೆ.