
ಉಕ್ರೇನ್‌ನ ಕ್ರಿವಿ ರಿಹ್‌ನಲ್ಲಿರುವ ಲಕ್ಷ್ಮೀ ಮಿತ್ತಲ್ ಒಡೆತನದ ಆರ್ಸೆಲರ್‌ಮಿತ್ತಲ್ ಉಕ್ಕಿನ ಸ್ಥಾವರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಈ ದಾಳಿಯಲ್ಲಿ 12 ಮಂದಿ ಗಾಯಗೊಂಡಿದ್ದು, ಸ್ಥಾವರದ ಪ್ರಮುಖ ಘಟಕಗಳಿಗೆ ಹಾನಿಯಾಗಿರುವುದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
2022ರಲ್ಲೂ ಇದೇ ಸ್ಥಾವರದ ಮೇಲೆ ರಷ್ಯಾ ದಾಳಿ ನಡೆಸಿದ್ದಾಗ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದರು ಎಂದು ಕಂಪನಿ ತಿಳಿಸಿದೆ.