
ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ವಿವಿಧೆಡೆ ಜಿಟಿಪಿಟಿ ಮಳೆಯೊಂದಿಗೆ ಗಾಢ ಕೆಂಪು ಬಣ್ಣದ ಮಳೆ ಸುರಿದಿದೆ.
ಕುಕನೂರು, ಬಿಟ್ಟಂಗಾಲ, ಎಮ್ಮೆಮಾಡು ಮತ್ತು ಮರಗೋಡು ಪ್ರದೇಶಗಳಲ್ಲಿ ಈ ವಿಚಿತ್ರ ವಿದ್ಯಮಾನ ಕಂಡುಬಂದಿದೆ.
ಮಳೆ ನೀರಿನ ಈ ವಿಚಿತ್ರ ಬಣ್ಣವು ಜನರಲ್ಲಿ ಆತಂಕ ಮೂಡಿಸಿದ್ದು, ತಕ್ಷಣವೇ ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.