
ತುಮಕೂರಿನ ಹೆಗಡೆ ಕಾಲೋನಿಯಲ್ಲಿ ಆಗಸ್ಟ್ 11ರಂದು ನಡೆದ ಸುಹೇಲ್ ಎಂಬಾತನ ಕೊಲೆ ಪ್ರಕರಣವನ್ನು ತಿಲಕ್ ಪಾರ್ಕ್ ಪೊಲೀಸರು ಭೇದಿಸಿದ್ದು, ಆರೋಪಿ ರಬ್ಬಾನ್ನನ್ನು ಬಂಧಿಸಿದ್ದಾರೆ.
ಮೂವರು ಸ್ನೇಹಿತರಾಗಿದ್ದ ಸುಹೇಲ್ ಮತ್ತು ರಬ್ಬಾನ್ ನಡುವೆ ರೀಲ್ಸ್ ನೋಡುವಾಗ ನಡೆದ ಗೇಲಿ ವಿಚಾರವಾಗಿ ಜಗಳ ಉಂಟಾಗಿ, ಅದು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ತನಿಖೆಯಲ್ಲಿ ಬಯಲಾಗಿದೆ.
ಆರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು, ಆದರೆ ಪೊಲೀಸರು ಸ್ಥಳದಲ್ಲಿದ್ದ ಇತರ ಸ್ನೇಹಿತರ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.