
ಆರ್ಬಿಎಸ್ಎಸ್ಎನ್ ಕಂಪನಿಗೆ 64.50 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಕ್ಕೆ ಲೀಸ್ ವಿಸ್ತರಿಸಿರುವುದರಿಂದ ಸಕ್ಕರೆ ಕಾರ್ಖಾನೆ ಕನಸು ನುಚ್ಚುನೂರಾಗಿದೆ ಎಂದು ಮಾಜಿ ಸಚಿವ ಆನಂದ ಸಿಂಗ್ ಆರೋಪಿಸಿದ್ದಾರೆ.
ಚದರ ಅಡಿಗೆ ₹2.29 ದರದಲ್ಲಿ ಲೀಸ್ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ ₹3,000 ಕೋಟಿ ನಷ್ಟ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಮುಂಚೆಯೇ ತಿಳಿಸಿದ್ದರೂ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.