
ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಮುಂದಿನ ಆಗಸ್ಟ್ ಒಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದೇ ಸರ್ಕಾರದ ಗುರಿ ಎಂದು ಮಂಡ್ಯದಲ್ಲಿ ಘೋಷಿಸಿದ್ದಾರೆ.
ಈ ಯೋಜನೆಗಾಗಿ 12,500 ಎಕರೆ ಜಮೀನು ಅಗತ್ಯವಿದ್ದು, ಈಗಾಗಲೇ 20,000 ಎಕರೆ ಜಮೀನನ್ನು ಗುರುತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಯೋಜನೆಯ ಮೇಲ್ವಿಚಾರಣೆಗಾಗಿ ದೆಹಲಿಯಲ್ಲಿ ಇಬ್ಬರು ನೀರಾವರಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತಾಂತ್ರಿಕ ಮತ್ತು ಕಾನೂನು ತಂಡಗಳು ವೇಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.