
ಖಾನಾಪುರ ತಾಲೂಕಿನ ಹುಳಂದ ಗ್ರಾಮದ ಮಹೇಶ ಗಾವಡೆ ಎಂಬುವವರ ಮೇಲೆ ಜೂನ್ 11 ರಂದು ಕರಡಿ ದಾಳಿ ನಡೆಸಿದ್ದು, ಅವರು ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಡಿಯ ಉಗುರುಗಳಿಂದ ಕಾಲಿನ ಚರ್ಮ ಕಿತ್ತು ಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ಮೂಲಕ ಕೃತಕ ಮೂಳೆ ಅಳವಡಿಸಲಾಗಿದೆ, ಆದರೆ ಇನ್ನೂ ಗುಣಮುಖರಾಗಿಲ್ಲ.
ಅರಣ್ಯ ಇಲಾಖೆಯು ಚಿಕಿತ್ಸಾ ವೆಚ್ಚ ಭರಿಸುತ್ತಿದ್ದರೂ, ಕುಟುಂಬದ ಇತರೆ ಖರ್ಚುಗಳನ್ನು ನಿಭಾಯಿಸಲು ಸರ್ಕಾರ ಶಾಶ್ವತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.