
ನೇಪಾಳದಲ್ಲಿ ಭೀಕರ ಜಲಪ್ರಳಯದಿಂದಾಗಿ ಗಡಿ ರಾಜ್ಯಗಳಾದ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಹಾರ ಸಿಎಂ ಸಾಮ್ರಾಟ್ ಚೌಧರಿ ಜೊತೆ ಮಾತನಾಡಿದ್ದಾರೆ.
ಗಂಡಕ್ ನದಿ ತೀರದ ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದ್ದು, NDRFನ 18 ತಂಡಗಳನ್ನು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ನಿಯೋಜಿಸಲಾಗಿದೆ.
ವಾಲ್ಮೀಕಿನಗರದ ಗಂಡಕ್ ನದಿ ಬ್ಯಾರೇಜ್‌ನ ಎಲ್ಲಾ 36 ಗೇಟ್‌ಗಳನ್ನು ತೆರೆಯಲಾಗಿದ್ದು, ನೇಪಾಳದ ನಾರಾಯಣಿ ನದಿಯ ನೀರಿನ ಮಟ್ಟ 4.77 ಮೀಟರ್‌ಗೆ ಏರಿದೆ.