
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 20ರ ಮಿನಿ ಹರಾಜು ಪ್ರಕ್ರಿಯೆಯು 2026ರ ಡಿಸೆಂಬರ್ 16ರಂದು ಗೋವಾದ ಐಟಿಸಿ ಗ್ರಾಂಡ್ ಗೋವಾ ಹೋಟೆಲ್ನಲ್ಲಿ ನಡೆಯಲಿದೆ.
ಹರಾಜಿಗೂ ಮುಂಚಿತವಾಗಿ ಡಿಸೆಂಬರ್ 15ರಂದು ಬಿಸಿಸಿಐ ಅಧಿಕಾರಿಗಳು ಮತ್ತು ಎಲ್ಲಾ 10 ಫ್ರಾಂಚೈಸಿಗಳ ಮಾಲೀಕರ ನಡುವೆ ವಿಶೇಷ ಸಭೆ ನಡೆಯಲಿದೆ.
ಎಲ್ಲಾ 10 ತಂಡಗಳು ತಾವು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 15 ಅನ್ನು ಅಂತಿಮ ಗಡುವು ಎಂದು ಬಿಸಿಸಿಐ ನಿಗದಿಪಡಿಸಿದೆ.