
ಹಾವೇರಿ ಜಿಲ್ಲೆಯ ದೇವರಗುಡ್ಡ ಮಾಲತೇಶ ಸ್ವಾಮಿಯ ಸನ್ನಿಧಿಯಲ್ಲಿ ನಡೆದ ನವರಾತ್ರಿ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನಾಗಪ್ಪ ಅಜ್ಜ ದೈವವಾಣಿ ನುಡಿದಿದ್ದಾರೆ.
'ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್' ಎಂಬ ಕಾರ್ಣಿಕ ನುಡಿಯು ದೇಶದ ಆಡಳಿತ ಚುಕ್ಕಾಣಿ ಸಾಧು-ಸಂತರು ಹಾಗೂ ಯೋಗಿಯೊಬ್ಬರ ಕೈ ಸೇರಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ದೈವವಾಣಿಯ ಮೂಲಕ ಹಿಂಗಾರು ಮಳೆಯು ನಿರೀಕ್ಷೆಯಂತೆ ಆಗಿ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ ಹಾಗೂ ನಾಡು ಸಮೃದ್ಧವಾಗಲಿದೆ ಎಂದು ಅರ್ಥೈಸಲಾಗಿದೆ.