
ಬೆಂಗಳೂರಿನ ಆರ್ಪಿಎಫ್ಎಎಸ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿಯು ಮಡ್ರೆಕ್ಸ್ ಮತ್ತು ಸೇಬರ್.ಮನಿ ಪ್ಲಾಟ್ಫಾರಂ ಬಳಸಿ 2018ರಿಂದ ಅಕ್ರಮವಾಗಿ ₹5,000 ಕೋಟಿ ಕ್ರಿಪ್ಟೊ ವಹಿವಾಟು ನಡೆಸಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.
ಆರ್ಬಿಐ ನೋಂದಣಿ ಇಲ್ಲದೆ ನಡೆಸಿದ ಈ ವಹಿವಾಟಿಗೆ ಸಾಮಾಜಿಕ ಜಾಲತಾಣ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿ, ಸಿಂಗಪುರ ಹಾಗೂ ದುಬೈ ಖಾತೆಗಳಿಗೆ ಹಣ ವರ್ಗಾಯಿಸಿ ಕಮಿಷನ್ ಪಡೆಯಲಾಗಿದೆ.
ಭೌತಿಕ ಶಾಖೆ ಇಲ್ಲದೆ ಆನ್ಲೈನ್ ಬ್ಯಾಂಕ್ ವ್ಯವಸ್ಥೆ ರೂಪಿಸಿ ವಿದೇಶಿ ಶೆಲ್ ಕಂಪನಿಗಳ ಮೂಲಕ ₹380 ಕೋಟಿಯನ್ನು ಭಾರತದ ಖಾತೆಗಳಿಗೆ ಮರಳಿ ವರ್ಗಾಯಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.