
ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಸಂಸ್ಥೆಯ ಸಾಧನೆಗಳನ್ನು ಕೊಂಡಾಡಿದರು.
ದೇಶದ 7.8 ಶೇಕಡಾ ತ್ರೈಮಾಸಿಕ ಬೆಳವಣಿಗೆಯು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದ ಮೋದಿ, ಭಯೋತ್ಪಾದನೆ ಹರಡುವವರು ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಭಾರತದ ಸಶಸ್ತ್ರ ಪಡೆಗಳು ಅವರ ಜಾಗಕ್ಕೆ ನುಗ್ಗಿ ದಾಳಿ ನಡೆಸಲಿವೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದರು.