
ಗಾಂಧಿ ಜಯಂತಿ ಪ್ರಯುಕ್ತ ಸ್ವಯಂಪ್ರೇರಣೆಯಿಂದ ಮದ್ಯ ಮಾರಾಟ ಮುಕ್ತವಾಗಿ ಗುರುತಿಸಿಕೊಂಡ ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ರಾಜ್ಯ ಸರ್ಕಾರದಿಂದ ಗಾಂಧಿ ಪುರಸ್ಕಾರ ನೀಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಹಟ್ಟಿ ಗ್ರಾಮವು ಮೊದಲು ಧ್ವನಿ ಎತ್ತಿತ್ತು ಎಂದು ತಿಳಿಸಿದ್ದಾರೆ.
ಕುಟುಂಬಗಳನ್ನು ಮದ್ಯದ ದುಷ್ಪರಿಣಾಮಗಳಿಂದ ರಕ್ಷಿಸಲು ಜನತೆ ಹಾಗೂ ಯುವಕರ ಸಹಭಾಗಿತ್ವದೊಂದಿಗೆ ಈ ಸಾಧನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.