ಮೈಸೂರು-ಚಾಮರಾಜನಗರ ರೈಲು ಮಾರ್ಗ ವಿದ್ಯುದೀಕರಣಗೊಂಡರೂ ಮೂರು ವರ್ಷ ಎಲೆಕ್ಟ್ರಿಕ್ ರೈಲು ಸಂಚರಿಸದ ಕಾರಣ ₹81 ಕೋಟಿ ಅನುತ್ಪಾದಕ ವೆಚ್ಚವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.
ವಿಮಾನ ನಿಲ್ದಾಣ ಪ್ರಾಧಿಕಾರದ ಎನ್‌ಒಸಿ ಪಡೆಯುವಲ್ಲಿನ ವಿಳಂಬದಿಂದಾಗಿ 2022ರ ಅಕ್ಟೋಬರ್‌ನಿಂದ 2025ರ ನವೆಂಬರ್‌ವರೆಗೆ ಎಲೆಕ್ಟ್ರಿಕ್ ರೈಲುಗಳ ಸಂಚಾರ ಸಾಧ್ಯವಾಗಿರಲಿಲ್ಲ.
ಈ ಅವಧಿಯಲ್ಲಿ ಡೀಸೆಲ್ ಲೋಕೋಗಳ ಬಳಕೆಗೆ ಪ್ರತಿ ತಿಂಗಳು ₹80 ಲಕ್ಷ ಹೆಚ್ಚುವರಿ ವೆಚ್ಚ ಮಾಡಲಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.