
ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಪಂಚಾಯ್ತಿಯಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ನಟ ಕಿಚ್ಚ ಸುದೀಪ್ ಅವರಿಗೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕದಲ್ಲಿ ನೀವೇ ಒಳ್ಳೆಯ ನಟ ಎಂದುಕೊಂಡಿದ್ದೆ ಆದರೆ ಇಲ್ಲಿರುವ ಕೆಲವರು ನಿಮಗಿಂತಲೂ ಒಳ್ಳೆಯ ನಟರಿದ್ದಾರೆ ಎಂದು ಅವರು ಹೇಳಿದರು.
ಓಂ ಪ್ರಕಾಶ್ ಅವರ ಈ ಮಾತಿಗೆ ಸುದೀಪ್ ಹಾಗೂ ಸ್ಪರ್ಧಿಗಳು ನಕ್ಕು ಮಂಜುಳವಾದ ವಾತಾವರಣ ನಿರ್ಮಾಣವಾಯಿತು.