
ದೇಶದಲ್ಲಿ ಸಕ್ಕರೆ ಬೆಲೆ ತೀವ್ರ ಏರಿಕೆಯಾಗಿದ್ದು, ಜುಲೈ 20 ರಂದು ಕಿಲೋಗೆ ₹48.18 ಇದ್ದ ಸರಾಸರಿ ಬೆಲೆ ಆಗಸ್ಟ್ 20 ರ ವೇಳೆಗೆ ₹55.70 ಕ್ಕೆ ತಲುಪಿದೆ.
ಕೇವಲ ಒಂದು ತಿಂಗಳ ಅವಧಿಯಲ್ಲಿ ಸಕ್ಕರೆ ಬೆಲೆಯಲ್ಲಿ ಶೇ. 15 ರಷ್ಟು ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಲೆ ಶೇ. 16 ರಷ್ಟು ಏರಿಕೆ ಕಂಡಿದೆ.
ಉತ್ಪಾದನೆಯಲ್ಲಿನ ಇಳಿಕೆ, ಹಬ್ಬದ ಬೇಡಿಕೆ ಮತ್ತು ಇಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆ ಹೆಚ್ಚಾಗಿರುವುದರಿಂದ ಸರ್ಕಾರವು ಸಕ್ಕರೆ ದಾಸ್ತಾನು ಮಿತಿ ಹೇರಲು ಮುಂದಾಗಿದೆ.