
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಎಎಲ್ ನಿರ್ಮಿತ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ವಾಯುಪಡೆಗೆ ಹಸ್ತಾಂತರಿಸಲಾಯಿತು.
ಈ ಹಸ್ತಾಂತರದಲ್ಲಿ ತೇಜಸ್ ಲಘು ಯುದ್ಧ ವಿಮಾನಗಳು, ಎಚ್‌ಟಿಟಿ-40 ತರಬೇತಿ ವಿಮಾನಗಳು ಹಾಗೂ ಧ್ರುವ ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಸೇರಿವೆ.
ಗಂಟೆಗೆ 2205 ಕಿಲೋಮೀಟರ್ ವೇಗದಲ್ಲಿ ಹಾರಬಲ್ಲ ತೇಜಸ್ ವಿಮಾನಗಳನ್ನು ಎಚ್‌ಎಎಲ್ ಮತ್ತು ಎಡಿಎ ಜಂಟಿಯಾಗಿ ತಯಾರಿಸಿವೆ.