
ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ 8 ವಿಕೆಟ್ ನಷ್ಟಕ್ಕೆ 363 ರನ್ ಗಳಿಸಿದೆ.
ಶ್ರೀಲಂಕಾ ಪರ ರವಿಂದು ರಸಂತ 71, ನಿಶಾನ್ ಫೆರ್ನಾಂಡೊ 66 ಮತ್ತು ಸೋನಲ್ ದಿನುಷಾ 52 ರನ್ ಗಳಿಸಿ ಅರ್ಧಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಭಾರತದ ಪರ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ಮಾನವ್ ಸುತಾರ್ ತಲಾ 2 ವಿಕೆಟ್ ಪಡೆದರೆ, ವೇಗದ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಿದರು.