ಕೆನಡಾದ ಒಂಟಾರಿಯೊದಲ್ಲಿ 'ಪ್ರಾಜೆಕ್ಟ್ ಬೇ' ಕಾರ್ಯಾಚರಣೆ ಮೂಲಕ 830 ಕೋಟಿ ರೂ. (139 ಮಿಲಿಯನ್ ಡಾಲರ್) ಮೌಲ್ಯದ 1.7 ಟನ್ ಅಕ್ರಮ ಮಾದಕವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ 13 ಭಾರತೀಯ ಮೂಲದ ಪ್ರಜೆಗಳು ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳು ಟ್ರಕ್ ಚಾಲಕರ ಸೋಗಿನಲ್ಲಿ ಅಮೆರಿಕಾದಿಂದ ಕೆನಡಾಕ್ಕೆ ಡ್ರಗ್ಸ್ ಸಾಗಿಸುತ್ತಿದ್ದರು.
ಜೂನ್ 25 ಮತ್ತು ಜುಲೈ 20ರ ನಡುವೆ ನಡೆಸಿದ 22 ಶೋಧ ಕಾರ್ಯಾಚರಣೆಗಳಲ್ಲಿ 973 ಕೆಜಿ ಕೊಕೇನ್, 660 ಕೆಜಿ ಮೆಥಾಂಫೆಟಮೈನ್ ಮತ್ತು 17 ಬಂದೂಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.