
ನಕಲಿ ಕೀ ಬಳಸಿ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ರಾಜಸ್ಥಾನದ ಸತ್ಯೇಂದ್ರ ಸಿಂಗ್ ಮತ್ತು ದೆಹಲಿಯ ಪ್ರಮೀಳಾ ಠಾಕೂರ್ ಎಂಬ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಜೂನ್ 27ರಂದು ಬೆಂಗಳೂರಿನಲ್ಲಿ 35 ಲಕ್ಷ ರೂ. ಮೌಲ್ಯದ ಟೊಯೋಟಾ ಫಾರ್ಚೂನರ್ ಕಾರನ್ನು ಕದ್ದಿದ್ದು, ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು.
ಆರೋಪಿ ಸತ್ಯೇಂದ್ರ ಸಿಂಗ್ ವಿರುದ್ಧ ಹೈದರಾಬಾದ್, ತಮಿಳುನಾಡು ಮತ್ತು ರಾಜಸ್ಥಾನ ಸೇರಿದಂತೆ ಒಟ್ಟು 21 ಕಾರು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.