
ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನದ ಮುನ್ನಾದಿನವಾದ ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ವಿಡಿಯೋ ಬಿಡುಗಡೆ ಮಾಡಿ ಸ್ವದೇಶಿ ವಸ್ತುಗಳನ್ನು ಖರೀದಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.
ಸ್ವದೇಶಿ ಚಳುವಳಿ ಆರಂಭವಾದ ಆಗಸ್ಟ್ 7, 1905ರ ಇತಿಹಾಸವನ್ನು ನೆನಪಿಸಿಕೊಂಡ ಪ್ರಧಾನಿ, ಬಡ ನೇಕಾರ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಕನಿಷ್ಠ ಒಂದು ಕೈಮಗ್ಗದ ವಸ್ತುವನ್ನಾದರೂ ಖರೀದಿಸಲು ಮನವಿ ಮಾಡಿದರು.
ಯುವಜನರು ತಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ #NationalHandloomDay ಹ್ಯಾಶ್ಟ್ಯಾಗ್ ಬಳಸಿ 'ಗೆಟ್ ರೆಡಿ ವಿತ್ ಮಿ' (GRWM) ವಿಡಿಯೋಗಳನ್ನು ಹಂಚಿಕೊಳ್ಳುವಂತೆ ಮೋದಿ ತಿಳಿಸಿದ್ದಾರೆ.