
ಹಾವೇರಿ ಜಿಲ್ಲೆಯ ಹತ್ತಿಮತ್ತೂರು ಗ್ರಾಮದ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ, ವೀಸಾ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ವಾರ್ಷಿಕ ₹46.33 ಲಕ್ಷ ಪ್ಯಾಕೇಜ್ನ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, 6ನೇ ಸೆಮೆಸ್ಟರ್ನಲ್ಲಿ ವೀಸಾ ಕಂಪನಿಯಲ್ಲಿ ತಿಂಗಳಿಗೆ ₹90,000 ಸ್ಟೈಫಂಡ್ನೊಂದಿಗೆ 10 ವಾರಗಳ ಇಂಟರ್ನ್ಶಿಪ್ ಪೂರ್ಣಗೊಳಿಸಿದ್ದರು.
ಈ ಪ್ಯಾಕೇಜ್ನಲ್ಲಿ ₹35.58 ಲಕ್ಷ ವೇತನದ ಜೊತೆಗೆ ₹7.5 ಲಕ್ಷ ವೈದ್ಯಕೀಯ ವಿಮೆ, ₹25,000 ಒಪಿಡಿ ನೆರವು ಮತ್ತು ₹3 ಲಕ್ಷ ಶೈಕ್ಷಣಿಕ ನೆರವು ಸೇರಿದೆ.