
ಚಂಡಮಾರುತ ಪ್ರಭಾವ ಹಾಗೂ ಕೇರಳದಲ್ಲಿ ಮಳೆಯಿಂದಾಗಿ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಜೀವಕಳೆ ಬಂದಿದೆ.
ಕೆಆರ್ಎಸ್ ಜಲಾಶಯಕ್ಕೆ 30 ಸಾವಿರ ಕ್ಯುಸೆಕ್ಗೂ ಹೆಚ್ಚು ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ 98.80 ಅಡಿ ತಲುಪಿದೆ.
ಕಬಿನಿ ಜಲಾಶಯ ಭರ್ತಿಯಾಗಿದ್ದು, 25 ಸಾವಿರ ಕ್ಯುಸೆಕ್ ನೀರನ್ನು ಕಪಿಲಾ ನದಿಗೆ ಹರಿಸಲಾಗಿದೆ.