
ಕ್ಯಾನ್ಸರ್ ಔಷಧಿಗಳ ವ್ಯಾಪಾರ ಲಾಭಾಂಶವನ್ನು ಶೇ.30ಕ್ಕೆ ಸೀಮಿತಗೊಳಿಸಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇವಲ ಕ್ಯಾನ್ಸರ್ ಔಷಧಿಗೆ ಮಾತ್ರವಲ್ಲದೆ ರೋಗಿಗಳಿಗೆ ದಿನನಿತ್ಯ ಬೇಕಾಗುವ ಇತರ ಎಲ್ಲಾ ಅಗತ್ಯ ಔಷಧಿಗಳ ದರಕ್ಕೂ ಏಕೆ ಮಿತಿ ಹೇರಬಾರದು ಎಂದು ಪ್ರಶ್ನಿಸಿದೆ.
ಸಾಮಾನ್ಯ ಔಷಧಿಗಳು ಮತ್ತು ಸಲೈನ್ ಬಾಟಲಿಗಳನ್ನು ತಯಾರಿಕಾ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿರುವುದನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ.