
ದೇಶದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಗ್ರಾಹಕರಿಗೆ ಸಬ್ಸಿಡಿಯಲ್ಲಿ ನಡೆಯುವ ಅಕ್ರಮ ತಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಅಕ್ಟೋಬರ್ 1ರಿಂದ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಇ-ಕೆವೈಸಿ ಪೂರ್ಣಗೊಳಿಸದವರ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣ ತಾತ್ಕಾಲಿಕವಾಗಿ ರದ್ದುಗೊಳ್ಳಲಿದ್ದು, ಮುಗಿಸಿದ ನಂತರವೇ ಹಣ ಮತ್ತೆ ಜಮೆಯಾಗಲು ಆರಂಭವಾಗಲಿದೆ ಹಾಗೂ ಸಿಲಿಂಡರ್ ವಿತರಣೆ ಎಂದಿನಂತೆ ಮುಂದುವರಿಯಲಿದೆ.
ಪ್ರಸ್ತುತ ದೇಶಾದ್ಯಂತ ಸುಮಾರು 24.73 ಕೋಟಿ ಅಂದರೆ ಶೇಕಡ 89.9 ರಷ್ಟು ಗ್ರಾಹಕರು ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.