
ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿರುವ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರಾರು ಭಕ್ತರು ಹಾಗೂ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.
ನವೆಂಬರ್ 11ರಂದು ದೇವಾಲಯವನ್ನು ಮುಚ್ಚಲಾಗುತ್ತಿದ್ದು, ಅದರ ಮುಂಚಿತವಾಗಿ ನಟಿ ಪ್ರೇಮಾ ಹಾಗೂ ಕಾರುಣ್ಯಾ ರಾಮ್ ಅವರು ದೇವಾಲಯಕ್ಕೆ ಆಗಮಿಸಿದ್ದರು.
ಇಬ್ಬರೂ ನಟಿಯರು ಸರಳವಾದ ಉಡುಗೆಗಳನ್ನು ತೊಟ್ಟು ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದುಕೊಂಡಿದ್ದಾರೆ.